ಇಂದು (ಅಗಷ್ಟ ೨) ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರೂವಾರಿ ಎಂದೇ ಪ್ರಸಿದ್ಧರಾದ ಡಾ. ದಾದಪ್ಪ(ದಾದಾಸಾಹೇಬ) ಚಿಂತಪ್ಪ ಪಾವಟೆ ಅವರ ಜನ್ಮ ದಿನ. ಬನ್ನಿ ತಾನ್ನಿಮಿತ್ಯ ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಅವರ ಮೂರ್ತಿಗೆ ವಿಷೇಶ ಪೂಜೆ ಸಲ್ಲಿಸೋಣ.
ಪಾವಟೆ ಅವರು ಬೆಳಗಾವಿ ಜಿಲ್ಲೆಯ ಗೊಕಾಕ ತಾಲೂಕಿನ ಮಮದಾಪುರದಲ್ಲಿ ೧೮೯೯ ಅಗಷ್ಟ ೨ ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಮದಾಪುರ ಮತ್ತು ಗೊಕಾಕಗಳಲ್ಲಿ ಮುಗಿಸಿದ ಪಾವಟೆಯವರು ಕೊಲ್ಹಾಪುರದ ರಾಜಾರಾಮ ಕಾಲೇಜಿನಿಂದ ಗಣಿತವನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು ಬಿಎ ಪದವಿಯನ್ನು ಪಡೆದುಕೊಂಡರು. ಮುಂದೆ ಕೆಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಎಮ್ ಎ ಪದವಿ ಗಳಿಸಿ ಗಣಿತದ ಟ್ರಿಪೊ ರ‍್ಯಾಂಗ್ಲರ ಪಟ್ಟವನ್ನು ಗಳಿಸಿದರು.
ಇಂಗ್ಲಂಡನಿಂದ ಮರಳಿದ ಪಾವಟೆ ಅವರು ಮುಂಬೈ ಕರ್ನಾಟಕದಲ್ಲಿ ಸ್ವಲ್ಪ ದಿನ ಶಿಕ್ಷಣ ಇಲಾಖೆಯಲ್ಲಿ ಕಮೀಶ್ನರ ಆಗಿ ಸೇವೆ ಸಲ್ಲಿಸಿದರು. ಆಮೇಲೆ ೧೯೫೪ರಿಂದ ೧೯೬೭ರವರೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲಿ ವಿಶ್ವವಿದ್ಯಾಲಯ ಸರ್ವೋತೊಮುಖ ಅಭಿವೃದ್ಧಿಯನ್ನು ಕಂಡಿತು. ಅವರ ಸೇವೆಯ ಸವಿ ನೆನೆಪಿಗೊಸ್ಕರ ಧಾರವಾಡದ ವಿಶ್ವವಿದ್ಯಾಲಯ ಇರುವ ಬಡಾವಣೆಯನ್ನು ಪಾವಟೆನಗರವೆಂದು ಹೆಸರಿಡಲಾಗಿದೆ.
ಆ ನಂತರ ಪಾವಟೆ ಅವರು ೧೯೬೭ ರಿಂದ ೧೯೭೩ರತನಕ ಅವರು ಪಂಜಾಬ ರಾಜ್ಯದ ಗವರ್ನರ ಆಗಿ ಸೇವೆ ಸಲ್ಲಿಸಿದರು. ಆಗಿನ ತಮ್ಮ ಅನುಭವಗಳನ್ನು ಕುರಿತು ಅವರು My Days As Governor ಎನ್ನುವ ಪುಸ್ತಕವನ್ನು ಬರೆದಿದ್ದಾರೆ.
ಅವರ ಪಾಂಡಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಅವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ ೧೯೬೭ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು
ಪಾವಟೆ ಅವರು ೧೯೭೮ ಜನೆವರಿ ೧೭ರಂದು ನಿಧನ ಹೊಂದಿದರು.
ಸೋಮವಾರ, ಆಗಸ್ಟ್ 2, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ