ಮಂಗಳವಾರ, ಜುಲೈ 20, 2010

ದ್ವೈತ ಸಿದ್ಧಾಂತದ ಪ್ರತಿಪಾದಕ ಮಧ್ವಾಚಾರ್ಯರು

ಕನ್ನಡ ನಾಡಿನಲ್ಲಿ ತಮ್ಮ ವೈದಿಕ ಮತ್ತು ತತ್ವಜ್ಞಾನದ ಮೂಲಕ ಧಾರ್ಮಿಕ ಪ್ರಜ್ಞ್ನೆಯನ್ನು ಜಾಗ್ರತಗೊಳಿಸಿದ ಆಚಾರ್ಯತ್ರಯರಲ್ಲಿ ಮಧ್ವಾಚಾರ್ಯರು (೧೨೩೮-೧೩೧೭) ಪ್ರಮುಖರು. ಅವರು ತಮ್ಮ ದ್ವೈತ ಸಿದ್ಧಾಂತದ ಮೂಲಕ ತತ್ವವಾದವನ್ನು ಪ್ರಚುರಪಡಿಸಿದರು. ಬನ್ನಿ ಈ ಸಲ ಉಡುಪಿಯ ಕೃಷ್ಣ ಮಠದಲ್ಲಿಯ ಅವರ ಮೂರ್ತಿಗೆ ಪೂಜೆ ಸಲ್ಲಿಸೋಣ.


ಮಧ್ವಾಚಾರ್ಯರು ೧೨೩೮ರ ವಿಜಯದಶಮಿಯ ದಿನದಂದು ಉಡುಪಿ  ಹತ್ತಿರದ ಪಾಜಕದಲ್ಲಿ ಜನಿಸಿದರು. ಅವರ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿ. ಅವರ ಮೊದಲನೆಯ ಹೆಸರು ವಾಸುದೇವ. ವಾಸುದೇವ ತನ್ನ ಹನ್ನೆರಡನೆ ವಯಸ್ಸಿನಲ್ಲಿ ಪಾರಂಪರಿಕ ವಿದ್ಯಾಭ್ಯಾಸವನ್ನು ಮುಗಿಸಿ ಗುರು ಅಚ್ಯುತಪ್ರಜ್ಞರಿಂದ ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡರು. ಮುಂದೆ ತಮ್ಮ ವೈದಿಕ ಮತ್ತು ತರ್ಕ ವಿಜ್ಞಾನದಲ್ಲಿ ವಿಶೇಷ ಜ್ಞಾನವನ್ನು ಪಡೆದು ಮಧ್ವಾಚಾರ್ಯರೆಂದು ಪ್ರಸಿದ್ಧರಾದರು.

ಅವರು ಪ್ರಚುರಪಡಿಸಿದ ದ್ವೈತ ಸಿದ್ಧಾಂತ ದ ಪ್ರಕಾರ ಬ್ರಹ್ಮ ಮತ್ತ ಆತ್ಮ ಎರಡು ಬೇರೆ ಬೇರೆಯಗಿದ್ದು, ಬ್ರಹ್ಮವು ವ್ಯಕ್ತಿತ್ವವನ್ನು ಹೊಂದಿರುವ ಸರ್ವ ಶಕ್ತ ವ್ಯಕ್ತಿಯೆಂದು ಭಾವಿಸಲಾಗುತ್ತದೆ.

ಮದ್ವಾಚಾರ್ಯರು ತಮ್ಮ ಸಿದ್ಧಾಂತದ ಪ್ರಚಾರಕ್ಕಾಗಿ ಇಡಿ ಭಾರತದ ತುಂಬೆಲ್ಲ ಪ್ರವಾಸ ಮಾಡಿದರು. ಆಗಿನ ಕಾಲದ ವೇದ ಪಂಡಿತರೊಂದಿಗೆ ವಾದ ಮಾಡಿ ತಮ್ಮ ಜ್ಞಾನ ಮತ್ತು ವಾಕ್ಚಾತುರ್ಯದ ಮೂಲಕ ಇಡೀ ದೇಶದ ಗಮನ ಸೆಳೆದರು. ಇವರಿಂದ ಪ್ರಭಾವಿತರಾಗಿ ಬಹಳಷ್ಟು ಜನ ಇವರ ಅನುಯಾಯಿಗಳಾದರು. ಇವರ ದ್ವೈತ ಸಿದ್ಧಾಂತವನ್ನು ಅನುಸರಿಸುವವರನ್ನು ಮಾಧ್ವರೆಂದೆ ಕರೆಯಲಾಗುತ್ತದೆ.

ಮಧ್ವಾಚಾರ್ಯರು ಉಡುಪಿಯಲ್ಲಿ ಎಂಟು ಮಠಗಳನ್ನು ಸ್ಥಾಪಿಸಿದರು. ಕೃಷ್ಣ ಮಠದಲ್ಲಿನ ಸುಪ್ರಸಿದ್ಧ ಕೃಷ್ಣನ ಮೂರ್ತಿಯೂ ಮಧ್ವಾಚಾರ್ಯರಿಂದಲೆ ಪ್ರತಿಸ್ಠಾಪಿಸಲ್ಪಟ್ಟಿತು.

ತಮ್ಮ ಹಿಂದಿನ ಅವತಾರಗಳಲ್ಲಿ ಹನುಮ ಮತ್ತು ಭೀಮ ಆಗಿದ್ದರೆಂದು ನಂಬಲ್ಪಟ್ಟ ಮಧ್ವಾಚಾರ್ಯರು ತಮ್ಮ ವೈದಿಕ ಮತ್ತು ತತ್ವಜ್ಞಾನದ ಮೂಲಕ ಇಡೀ ಭಾರತದ ತುಂಬ ಸಂಚಲನ ಉಂಟು ಮಾಡಿದ ಮಹಾನ್ ಗುರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ