ಬೆಂಗಳೂರಿಗರೆಲ್ಲ ಯಾವತ್ತೂ ನೆನೆಪಿಡಬೇಕಾದ ರಾಜಕಾರಣಿ ಟಿ ಆರ್ ಶಾಮಣ್ಣ. ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ, ಮತ್ತು ಪರಿಶುದ್ಧ ರಾಜಕಾರಣಿಯಾಗಿ ಅವರು ಯಾವತ್ತೂ ಸ್ಮರಣೀಯರು. ಇಂದು (ಮಾರ್ಚ್ ೧೪ ) ಅವರ ಜನುಮದಿನ. ಬನ್ನಿ ಬೆಂಗಳೂರಿನ ನರಸಿಂಹರಾಜ ಕಾಲನಿಯಲ್ಲಿರುವ ಅವರ ಮೂರ್ತಿಗೆ ಪೂಜೆ ಸಲ್ಲಿಸೋಣ.
ಸ್ಥಾಪನಾ ದಿನಾಂಕ : ೨೩/೦೮/೨೦೦೮
ಮಾರ್ಚ್ ೧೪ ೧೯೧೩ ರಲ್ಲಿ ಹುಟ್ಟಿದ ಶಾಮಣ್ಣ ಮಹಾತ್ಮಾ ಗಾಂಧಿಯ ಕರೆಗೆ ಓಗೊಟ್ಟು ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮಕಿದವರು. ಮತ್ತು ಅದಕ್ಕಾಗಿ ಜೈಲುವಾಸವನ್ನೂ ಅನುಭವಿಸಿದವರು. ಸ್ವಾತಂತ್ರ್ಯದ ನಂತರ ಸಮಾಜ ಸೇವೆಯಲ್ಲಿ ತೊಡಗಿಕೊಂಡ ಶಾಮಣ್ಣನವರನ್ನು ಜನತೆ ಬೆಂಗಳೂರಿನ ನಗರ ಸಭೆಯ ಸದಸ್ಯನನ್ನಾಗಿ ಆರಿಸಿತು. ನಗರಸಭೆಯ ಸದಸ್ಯರಿದ್ದಾಗ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಶಾಮಣ್ಣನವರು, ಆವಾಗ ರಾಜ್ಯ ಸರಕಾರ ಸೈಕಲ್ಲಿಗೆ ಕರ ವಿಧಿಸಬೇಕೆಂಬ ಕಾನೂನು ತಂದಾಗ ಅದನ್ನು ವಿರೋಧಿಸಿದರಲ್ಲದೇ ಅದನ್ನು ನಿಲ್ಲಿಸಲೂ ಕಾರಣೀಭೂತರಾದರು. ಹಾಗೇಯೆ ಬೆಂಗಳೂರಿಗೆ ಕಾವೇರಿ ನದಿಯಿಂದ ಕುಡಿಯುವ ನೀರನ್ನೂ ಪೂರೈಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವದರಲ್ಲಿಯೂ ಶಾಮಣ್ಣನವರ ಕೊಡುಗೆ ದೊಡ್ಡದು.
ಶಾಮಣ್ಣನವರ ಜನಪರ ಕಾರ್ಯ ಮತ್ತು ಸರಳ ಜೀವನವನ್ನು ಮೆಚ್ಚಿಕೊಂಡ ಜನ ಅವರನ್ನು ೧೯೬೭, ೧೯೭೭ ಮತ್ತು ೧೯೭೮ ರಲ್ಲಿ ಬಸವನ ಗುಡಿ ವಿಧಾನಸಭಾ ಕ್ಷೇತ್ರದಿಂದ ಅವರನ್ನು ಶಾಸಕರನ್ನಾಗಿ ಆರಿಸಿ ಕಳಿಸಿತು.
೧೯೮೦ ರಲ್ಲಿ ಶಾಮಣ್ಣನವರು ಸಂಸತ್ಸದಸ್ಯರಾಗಿಯೂ ಮತ್ತು ೧೯೮೫ ರಲ್ಲಿ ಕರ್ನಾಟಕದ ವಿಧಾನಸಭಾ ಸದಸ್ಯರಾಗಿಯೂ ಆಯ್ಕೆ ಆಗಿದ್ದರು. ಅಷ್ಟೆ ಅಲ್ಲದೇ ಶಾಮಣ್ಣನವರು ರಾಷ್ಟ್ರೀಯ ಸಹಕಾರಿ ಬ್ಯಾಂಕ್ ನ ಸಂಸ್ಥಾಪಕ ಸದಸ್ಯರಾಗಿದ್ದರು.
ಶಾಮಣ್ಣನವರು ೩೦.೦೮.೧೯೯೦ರಂದು ನಿಧನರಾದರು. ಅವರ ಸ್ಮರಣೆಗಾಗಿ ಬಸವನಗುಡಿಯಲ್ಲಿರುವ ಬ್ಯುಗಲ್ ರಾಕ್ (ಕಹಳೆ ಬಂಡೆ) ಉದ್ಯಾನವನಕ್ಕೆ ಅವರ ಹೆಸರನ್ನಿಡಿಲಾಗಿದೆ.
ಭಾನುವಾರ, ಮಾರ್ಚ್ 14, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ