ಇಂದು ನಮ್ಮ ಗಣರಾಜ್ಯೋತ್ಸವ ಅಷ್ಟೇ ಅಲ್ಲ, ನಮ್ಮ ನಾಡಿನ ಹೆಮ್ಮೆಯ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣನ ಪುಣ್ಯದಿನವೂ ಹೌದು.
ಇಂದಿನ ಗೋಕಾಕು ತಾಲೂಕಿನ ಗಣೇಶವಾಡಿ ಯಲ್ಲಿ ಜನಿಸಿದ ರಾಯಣ್ಣ, ಕಿತ್ತೂರು ಚೆನ್ನಮ್ಮನ ಬಲಗೈ ಬಂಟನೆಂದೇ ಪ್ರಸಿದ್ಧ.
ಬ್ರಿಟಿಷ್‌ರ ವಿರುದ್ಧ ಕಿತ್ತೂರ ಚೆನ್ನಮ್ಮ ದ೦ಗೆ ಎದ್ದಾಗ ಅದರಲ್ಲಿ ಭಾಗವಹಿಸಿದ್ದ ಐದು ಸಾವಿರ ಸಶಸ್ತ್ರ ಹೋರಾಟಗಾರರಲ್ಲಿ ಆಗಿನ್ನೂ ೨೯ ವರ್ಷದವನಾಗಿದ್ದ ಸ೦ಗೊಳ್ಳಿ ರಾಯಣ್ಣ ಕೂಡ ಒಬ್ಬನಾಗಿದ್ದ. ಕಿತ್ತೂರು ಬ೦ಡಾಯ ಹತ್ತಿಕ್ಕಲ್ಪಟ್ಟಾಗ ರಾಯಣ್ಣ ಬ೦ಧಿತನಾಗಿದ್ದ. ೧೮೨೬ ರಲ್ಲಿ ಎಲ್ಲ ಬ೦ಧಿತರಿಗೂ ಸಾರ್ವತ್ರಿಕ ಕ್ಷಮೆ ನೀಡಿ, ಎಚ್ಚರಿಕೆಯೊ೦ದಿಗೆ ಬಿಡುಗಡೆ ಮಾಡಿದಾಗ ರಾಯಣ್ಣ ಕೂಡ ಹೊರಬ೦ದಿದ್ದ.
ಹೊರ ಬಂದ ರಾಯಣ್ಣ ಸೈನ್ಯವನ್ನು ಸಂಘಟಿಸಿ, ಬ್ರಿಟೀಷರವಿರುದ್ಧ ಗೆರಿಲ್ಲಾ ಮಾದರಿ ಯುದ್ಧವನ್ನು ಮುಂದುವರಿಸಿದ್ದ. ಬ್ರಿಟೀಷರ ನಿದ್ದೆಗೆಡಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದ ರಾಯಣ್ಣನಿಗೆ ತನ್ನ ನಂಬಿಕಸ್ತರಿಂದಲೇ ಮೋಸವಾಯಿತು. ಅದರ ಬಗ್ಗೆ ಒಂದು ಲಾವಣಿ ಹೀಗೆ ಹೇಳುತ್ತೆ :
ಬರದರು ಗೋನಾಳ ಗೌಡಗ ತುರತಾ
ಪತ್ರ
ಹೀಗೆ ಮೋಸದಿಂದ ರಾಯಣ್ಣನನ್ನು ಸೆರೆಹಿಡಿದ ಬ್ರಿಟೀಷರು ಅವನ ಮೇಲೆ ಮುಕದ್ದಮೆ ನಡೆಸಿದ ನಾಟಕಮಾಡಿ, ಅವನನ್ನು ನಂದಗಡದಲ್ಲಿ ಗಲ್ಲಿಗೇರಿಸಿದ್ದರು. ರಾಯಣ್ಣನ ಶವವನ್ನು ಹೂತ ಜಾಗೆಯಲ್ಲಿ ಅವನ ಅನುಯಾಯಿಗಳು ಅಂದು ನೆಟ್ಟ ಆಲದ ಮರ ಇಂದೀಗೂ ನಂದಗಡದಲ್ಲಿದೆ.
ಸ್ವತಂತ್ರ ಭಾರತದಲ್ಲಿ ಇಂದು ಸ್ವಚ್ಚಂದವಾಗಿ ಬದುಕುತ್ತಿರುವ ನಾವು , ಇದಕ್ಕೆ ಕಾರಣಕರ್ತರಾದ ರಾಯಣ್ಣನಂತವರನ್ನು ನೆನೆಯೋಣ..
ಜರೂರ ಮಾಡಿ ಬರಬೇಕು ಇವತ್ತ
ಓಡಿ ಹೋದ ಗೋನಾಳ ಗೌಡ ತುರ್ತಾ
ಪ್ರೀತಿಮಾಡ್ಯಾರ ಇಂಗ್ರೇಜವರ ಕೂತ
ರಾಯಗ ಹಿಡಿದುಕೊಡಬೇಕ ನಮಗ ತುರ್ತ
ಬೇಡಿದಷ್ಟು ಇನಾಮು ಕೊಡತೇವಂತಾರ
ಆಶಾಕ ಬಿದ್ದು ವಚನ ಕೊಟ್ಟು ಕೂತ
ಗುರುವಾರ ಬರ್ಯೋ ನೀವು ತುರುತಾ
ಮೋಸ ಮಾಡಿ ಅಂವಾ ಪಿತೂರಿಮಾಡಿ ಪತ್ರ ಬರೆದ
ಗುರುತ ಇಡಲಿಲ್ಲ ಕೆಳಗಿನ ಒಳಗಿನ ಮಾತ
ಇಸವಾಸಕಾಗಿ ರಾಯನ ಟವಳಿ ನಡೀತ ಆವತ್ತ
ಮುಜರೆ ಹೊಡದು ನಿಂತಾನ ಗೌಡನ ಎದರೀಗಿ ನಕ್ಕೋತ
ಪರಾಕ್ರಮ ಬಾಳ ಆತ! ಕಾಡೋ ವಿಧಿ ಬೆನ್ನ ಬಿತ್ತಾ!
ದುರಾದೃಷ್ಟ ಬಂದೂ ರಾಯಣ್ಣಗ ಒದಗಿತ್ತಾ
ಬೇಸ್ತವಾರ ದಿವಸ ಒಳ್ಳೇ ಆರತಾಸ ಹೊತ್ತ ಏರಿ !
ಒಳಗಿಂದೋಳಗ ತಾರಮಾಡಿ ಕಳಶ್ಯಾನ ದುಷ್ಟವಂತಾ
ಆಗ ಒಂಭೈನೂರ ಮಂದಿ ಬಂದ ಕೂತದ ಏಕಾಂತಾ!
ಭರ್ತಿ ಬಾರಾದ ವ್ಯಾಳೇಕ ಬಂದು ಕಾಳ ಒದಗಿತ್ತಾ!
ಜಳಕದ ನೆವ ಮಾಡಿಕೊಂಡು ಗೌಡ ಕರಕೊಂಡು ಹೋದನಪ್ಪಾ!
ವಡ್ಡರ ಎಂಕ್ಯಾ ಗಜವರ ಹೋದ್ರ ಬೈಲಕಡಿ ಬಂದಿತ್ತಾ!
ಬಿಚ್ಚುಗತ್ತಿ ಚನಬಸ್ಸೂ ಕೂಡಿ ಹೋಗ್ಯಾರಾವತ್ತಾ
ಭಾಂವಿಯೊಳಗ ಇಳಿದ ರಾಯ ಸಂಸೆ ಇಲ್ಲದೇ ನಿಂತನಪ್ಪ
ಸಿಳ್ಳಹೊಡದ ಗೌಡ ಹೋದನ ಗುಪ್ತಾ!
ಆಗ ಒಂಭೈನೂರು ಜನ ಬಂತು ಕೂಗ ಹೊಡಕೋತ
ರಾಯನ ಕೈಗೆ ಏನು ಸಿಗಲಿಲ್ಲ ನೋಡ್ಯಾನ ಸುತ್ತಮುತ್ತಾ!
ಪಾವಟಿಗಿ ಕಲ್ಲ ಕಿತ್ತುಕೊಂಡು ಖಬರ ಇಲ್ಲದ ಹೊಡದಾನಪ್ಪಾ!
ಮುವತ್ತ ಹೆಣಾ ಉಳ್ಯಾಡತಾವ ಭಾಂವಿ ಸುತ್ತಮುತ್ತಾ!
ಮೋಸ ಮಾಡಿ ರಾಯಾಗ ಹಿಡಿದಾರಪ್ಪ ಕಾಳ ಒದಗಿತ್ತಾ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ